ನಟ ಕಿಚ್ಚ ಸುದೀಪ್ ಅವರು 5ನೇ ವಾರದ ಪಂಚಾಯ್ತಿ ನಡೆಸಲು ಸಜ್ಜಾಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಈ ಬಾರಿ ಕೂಗಾಟ, ಕಿರುಚಾಟ ಜೋರಾಗಿದೆ. ಟಾಸ್ಕ್ ಇದ್ದಾಗ ಒಬ್ಬರಿಬೊಬ್ಬರು ಬೈಯ್ದಾಡಿಕೊಂಡಿದ್ದಾರೆ. ಕೆಲವರು ತಂತ್ರದ ಜೊತೆಗೆ ಕುತಂತ್ರವನ್ನೂ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ ಸುದೀಪ್ ಮಾತನಾಡಲಿದ್ದಾರೆ. ಕಳೆದ ವಾರ ವಿನಯ್ ಗೌಡ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಾರಿ ಯಾರಿಗೆ ಪಾಠ ಮಾಡಲಿದ್ದಾರೆ ಎಂಬ ಕೌತುಕ ಮೂಡಿದೆ. ನವೆಂಬರ್ 11ರ ವೀಕೆಂಡ್ ಸಂಚಿಕೆ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಈ ಎಪಿಸೋಡ್ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಬಿಗ್ ಬಾಸ್ ಶೋ ಉಚಿತವಾಗಿ ವೀಕ್ಷಿಸಲು ಅವಕಾಶ ಇದೆ.