ಹೀಗೂ ಉಂಟೆ ಎಂದು ಉದ್ಘಾರ ತೆಗೆಯುವಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಕಳ್ಳತನ!

ಹುಬ್ಬಳ್ಳಿ, ಸೆಪ್ಟೆಂಬರ್​ 21: ಅಬ್ಬಾ ಹೀಗೂ ಉಂಟೆ ಎಂದು ಉದ್ಘಾರ ತೆಗೆಯುವಷ್ಟರಮಟ್ಟಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಕಳ್ಳತನ ನಡೆದಿದೆ. ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಲ್ಲಿ ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ಇಂತಹ ಕಳ್ಳತನ ನಡೆದಿದೆ. ದೊಡ್ಡಮನಿ ಅವರ ಮನೆಯಲ್ಲಿದ್ದವರನ್ನ ಕಟ್ಟಿಹಾಕಿ ಕಳ್ಳತನ ಮಾಡಿದ್ದಾರೆ. ಅದೂ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ!