ರಾಜ್ಯದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ಅವರು ಜನ ಮತ್ತು ದೇಶ ಮೆಚ್ಚುವ ರೀತಿಯಲ್ಲಿ ಸಮರ್ಥ ಆಡಳಿತ ನೀಡಿದ್ದರು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅದ್ಭುತವಾಗಿ ಮಾತಾಡುತ್ತಿದ್ದ ಅವರು ಬಳಸುತ್ತಿದ್ದ ಪದಗಳು ನಿಘಂಟಿನಲ್ಲೂ ಸಿಗುತ್ತಿರಲಿಲ್ಲ ಎಂದು ಅಶೋಕ ಹೇಳಿದರು.