‘ಕನ್ನಡ ಕಲಿಯುವ ಮನಸ್ಸಾಗಿದೆ’: ಕರುನಾಡಿಗೆ ಬಂದು ಆಸೆ ಹೇಳಿಕೊಂಡ ಪವನ್​ ಕಲ್ಯಾಣ್​

ನಟ ಪವನ್​ ಕಲ್ಯಾಣ್​ ಅವರು ಈಗ ರಾಜಕೀಯದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿಯಾಗಿ ಅವರು ಕಾರ್ಯನಿರತರಾಗಿದ್ದಾರೆ. ವಿವಿಧ ಪ್ರದೇಶಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಇಂದು (ಆಗಸ್ಟ್​ 8) ಪವನ್​ ಕಲ್ಯಾಣ್​ ಅವರು ಬೆಂಗಳೂರಿಗೆ ಆಗಮಿಸಿದ್ದರು. ಕರ್ನಾಟಕ ಅರಣ್ಯ ಇಲಾಖೆ ಜೊತೆ ನಡೆಸಿದೆ ಸಭೆಯಲ್ಲಿ ಪವನ್​ ಕಲ್ಯಾಣ್​ ಭಾಗಿಯಾದರು. ಈ ಸಂದರ್ಭದಲ್ಲಿ ಅವರು ಕನ್ನಡ ಭಾಷೆಯ ಬಗ್ಗೆ ಮಾತನಾಡಿದರು. ಕನ್ನಡವನ್ನು ತಾವೂ ಕೂಡ ಕಲಿತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರು ಹೇಳಿದರು. ‘ಈ ಸಭೆಯಿಂದ ನನಗೂ ಕನ್ನಡ ಕಲಿಯುವ ಮನಸ್ಸಾಗಿದೆ’ ಎಂದಿದ್ದಾರೆ ಪವನ್​ ಕಲ್ಯಾಣ್​. ಅವರ ಈ ಮಾತುಗಳನ್ನು ಕೇಳಿ ಕರುನಾಡಿನಲ್ಲಿನ ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದೆ. ಜನರಿಗೆ ಪವನ್​ ಕಲ್ಯಾಣ್​ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ.