ಬಿಗ್ಬಾಸ್ ಕನ್ನಡ ಸೀಸನ್ 10ರ 'ರೌಡಿ' ವಿನಯ್ ಎಂಬುದು ಹಲವರ ಅಭಿಪ್ರಾಯ. ಇತರೆ ಸ್ಪರ್ಧಿಗಳ ಮೇಲೆ ದರ್ಪ ತೋರುತ್ತಾರೆ, ದಾರ್ಷ್ಯತನದಿಂದ ವರ್ತಿಸುತ್ತಾರೆ ಎಂಬ ಕೆಲ ಟೀಕೆಗಳು ಅವರ ಮೇಲಿವೆ. ಆದರೆ ಬಿಗ್ಬಾಸ್ ಮನೆಯಲ್ಲಿ ಅವರಿಗಿಂತಲೂ ದೊಡ್ಡ ರೌಡಿ ಒಬ್ಬರಿದ್ದಾರೆ ಅದುವೇ ತುಕಾಲಿ ಸಂತು. ಸಂತೋಷ್ ಅವರನ್ನು ಕಮಿಡಿಯನ್ ಅಂದುಕೊಂಡಿದ್ದರೆ ಅದು ಸುಳ್ಳು ತುಕಾಲಿ ಸಂತು ಬಹಳ ದೊಡ್ಡ ರೌಡಿಯಂತೆ ಹೀಗೆಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಹವಾ ಹೇಗಿತ್ತು, ಎಷ್ಟು ಮಚ್ಚು ಹಿಡಿದುಕೊಂಡು ಓಡಾಡುತ್ತಿದ್ದೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.