ಪ್ರಕರಣದಲ್ಲಿ ಈಗಾಗಲೇ ಎಫ್ಐರ್ ಆಗಿದೆ, ಪೊಲೀಸರು ತನಿಖೆ ಮಾಡುತ್ತಾರೆ ಮತ್ತು ಸತ್ಯವನ್ನು ಬಯಲಿಗೆಳೆಯುತ್ತಾರೆ, ಬಿಜೆಪಿ ನಾಯಕರು ಮಡಿಕೇರಿಯ ಡಿಸಿಪಿಯವರಿಗೆ ಫೋನ್ ಮಾಡುವ ಅವಶ್ಯಕತೆಯೇನಿದೆ? ತಾನು ಒಮ್ಮೆಯೂ ವಿನಯ್ ಸೋಮಯ್ಯ ಅವರೊಂದಿಗೆ ಮಾತಾಡಿಲ್ಲ, ಇನ್ನು ಅವರಿಗೆ ಮಾನಸಿಕ ಕಿರುಕುಳ ನೀಡುವ ಸಂದರ್ಭ ಹೇಗೆ ಸೃಷ್ಟಿಯಾಗುತ್ತದೆ ಎಂದು ಪೊನ್ನಣ್ಣ ಪ್ರಶ್ನಿಸಿದರು.