ಸತೀಶ್ ಜಾರಕಿಹೊಳಿ ಮನೆಗೆ ಡಿಕೆ ಶಿವಕುಮಾರ್ ಭೇಟಿ

ಬೆಳಗಾವಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಸತೀಶ್ ಮತ್ತು ಶಿವಕುಮಾರ್ ನಡುವೆ ಕೆಲ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಸಾರ್ಟ್ ಔಟ್ ಮಾಡುವ ಕಾರ್ಯ ಪ್ರಾಯಶಃ ಗೃಹ ಸಚಿವ ಜಿ ಪರಮೇಶ್ವರ ಮಾಡಿದ್ದಾರೆ ಅನಿಸುತ್ತದೆ. ಸತೀಶ್ ಕೆಲವು ಸಲ ಪರಮೇಶ್ವರ್ ನಿವಾಸದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಒಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲ್ಲಿಗೆ ಹೋಗಿ ಪರಮೇಶ್ವರ್ ಹಾಗೂ ಸತೀಶ್ ಜೊತೆ ಡಿನ್ನರ್ ಮಾಡಿದ್ದರು.