ಬೇರೆ ಬೇರೆ ಗ್ರಾಮಗಳ ಜನರ ಜೊತೆ ಶಾಸಕ ಮಾತಾಡಿದರು ಮತ್ತು ಹುಲಿದಾಳಿಯಲ್ಲಿ ಪ್ರಾಣಿಗಳನ್ನು ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಬಳಿಕ ಅವರು ಸಂಬಂಧಪಟ್ಟ ಅರಣ್ಯಾಧಿಕಾರಿಗಳೊಂದಿಗೆ ಮಾತಾಡಿ ದೊಡ್ಡ ಅನಾಹುತಗಳು ಸಂಭವಿಸುವ ಮೊದಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾಕೀತು ಮಾಡಿದರು.