ಇವರನ್ನು ಆ ದೇವರು ಸುಮ್ಮನೆ ಬಿಡಲ್ಲ: ಎ ಮಂಜು

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಅರಕಲಗೂಡಿನ ಜೆಡಿಎಸ್ ಶಾಸಕ ಎ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೇಸ್​ನಲ್ಲಿ ಸಂಬಂಧ ಇಲ್ಲದ ಎಚ್ ಡಿ ರೇವಣ್ಣರನ್ನು ವಿನಾಕಾರಣ ಸಿಲುಕಿಸಿದ್ದಾರೆ. ಯಾರೇ ಈ ಕೆಲಸ ಮಾಡಿದರೂ ಆ ದೇವರು ಕ್ಷಮಿಸಲ್ಲ ಎಂದು ಮಂಜು ಗುಡುಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಚಾರ ಹೊರಬರಲಿದೆ. ಯಾರು ಮಾಡಿಸಿದ್ದು, ಯಾರು ಮಾಡಿಸಿಲ್ಲ ಇವೆಲ್ಲಾ ಗೊತ್ತಾಗಲಿದೆ ಎಂದೂ ಮಾಜಿ ಸಚಿವರು ಹೇಳಿದ್ದಾರೆ.