ರೇಣುಕಾಸ್ವಾಮಿ ಹತ್ಯೆ ಕೇಸ್: ಕೊಲೆ ಆರೋಪಿಗೆ ಮೊಬೈಲ್ ಕೊಟ್ಟ ಪೊಲೀಸ್ ಸಿಬ್ಬಂದಿ, ದೃಶ್ಯ ಸೆರೆ

ನಿನ್ನೆ ಬೆಂಗಳೂರಿನ R.R.ನಗರದ ಪಟ್ಟಣಗೆರೆ ಶೆಡ್​​ನಲ್ಲಿ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಯುತ್ತಿರುವಾಗ ಓರ್ವ ಆರೋಪಿಗೆ ಪೊಲೀಸ್ ಸಿಬ್ಬಂದಿ ಮೊಬೈಲ್ ಕೊಟ್ಟಿದ್ದು, ಆತ ಮಾತಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಪೊಲೀಸರ ಬಳಿ ಕಾಡಿ ಬೇಡಿ ಆರೋಪಿ ಮೊಬೈಲ್ ಪಡೆದಿದ್ದಾರೆ ಎನ್ನಲಾಗಿದೆ.