‘ಶಿವಣ್ಣನೇ ಫಸ್ಟ್​, ನಾನು ನೆಕ್ಸ್ಟ್​; ರಾಜ್​ ಕುಟುಂಬವೇ ನಮಗೆ ಹೆಡ್​ ಆಫೀಸ್​’ ಎಂದ ರವಿಚಂದ್ರನ್​

ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಂಎನ್​ ಕುಮಾರ್​ ನಡುವೆ ಉಂಟಾಗಿರುವ ಜಗಳ ಈಗ ಬೇರೆ ಹಂತಕ್ಕೆ ಹೋಗಿದೆ. ಸುದೀಪ್​ ಅವರು ಕೋರ್ಟ್​ ಮೆಟ್ಟಿಲು ಏರಿದ್ದಾರೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಚಿತ್ರರಂಗದ ಹಿರಿಯರು ಪ್ರಯತ್ನ ಮಾಡುತ್ತಿದ್ದಾರೆ. ಶಿವರಾಜ್​ಕುಮಾರ್​ ಮತ್ತು ರವಿಚಂದ್ರನ್​ ಅವರ ಸಮ್ಮುಖದಲ್ಲಿ ರಾಜಿ ಮಾಡಿಸುವ ಪ್ರಯತ್ನ ಜಾರಿಯಲ್ಲಿದೆ. ಈ ಕುರಿತು ರವಿಚಂದ್ರನ್​ ಮಾತನಾಡಿದ್ದಾರೆ. ‘ಶಿವರಾಜ್​ಕುಮಾರ್​ ಅವರ ಬಳಿಯೇ ಮೊದಲು ಹೋಗಬೇಕು. ಅವರೇ ಫಸ್ಟ್​. ನಾನು ಯಾವತ್ತಿದ್ದರೂ ನೆಕ್ಸ್ಟ್​. ರಾಜ್​ಕುಮಾರ್​ ಅವರ ಫ್ಯಾಮಿಲಿಯೇ ಹೆಡ್​ ಆಫೀಸ್​. ಅವರ ಹೆಸರು ಹೇಳಿದರೆ ಅರ್ಧ ಸಮಸ್ಯೆ ಪರಿಹಾರ ಆಗುತ್ತದೆ’ ಎಂದು ರವಿಚಂದ್ರನ್​ ಹೇಳಿದ್ದಾರೆ.