‘ಯುಐ’ ಸಿನಿಮಾ ನೋಡಿ ಯಶ್​ಗೆ ಅನಿಸಿದ್ದು ಹೀಗೆ

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ನಿನ್ನೆ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಸಿನಿಮಾ ನೋಡಲು ಯಶ್, ರಾಧಿಕಾರ, ಸುದೀಪ್ ಸೇರಿದಂತೆ ಹಲವು ತಾರೆಯರು ಆಗಮಿಸಿದ್ದರು. ಸಿನಿಮಾದ ನೋಡಿದ ತಾರೆಯರು ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಸಿನಿಮಾ ನೋಡಿ ಮಾಧ್ಯಮಗಳ ಬಳಿ ಮಾತನಾಡಿದ ಯಶ್, ‘ಉಪೇಂದ್ರ ಅವರು ಯಾವಾಗಲೂ ಭಿನ್ನವಾದ ಸಿನಿಮಾಗಳನ್ನೇ ಮಾಡುತ್ತಾರೆ. ತಮ್ಮ ಯೋಚನೆಗಳನ್ನು ರೂಪಕಗಳ ಮೂಲಕ ಪ್ರೇಕ್ಷಕರ ಮುಂದೆ ಇಡುತ್ತಾರೆ ಎಂದರು.