‘ಡೆವಿಲ್’ ಚಿತ್ರೀಕರಣ ಪ್ರಾರಂಭ ಯಾವಾಗ? ನಿರ್ಮಾಪಕ ಚಿನ್ನೇಗೌಡರು ಕೊಟ್ಟರು ಉತ್ತರ

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಚಿತ್ರೀಕರಣ ನಿಂತು ಹೋಗಿ ಒಂಬತ್ತು ತಿಂಗಳಾಗಿವೆ. ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಸಿನಿಮಾದ ಚಿತ್ರೀಕರಣ ಈಗ ಶುರುವಾಗುತ್ತದೆ, ಆಗ ಶುರುವಾಗುತ್ತದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಲೇ ಇರುತ್ತವೆ. ಆದರೆ ಇನ್ನೂ ಶುರುವಾಗಿಲ್ಲ. ಶ್ರೀಮುರಳಿ, ವಿಜಯ್ ರಾಘವೇಂದ್ರ ಅವರ ತಂದೆ, ನಿರ್ಮಾಪಕರೂ ಆದ ಚಿನ್ನೇಗೌಡರು ಈ ಬಗ್ಗೆ ಮಾತನಾಡಿದ್ದಾರೆ.