ರಿಷಬ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನಡೆದ ‘ಟೋಬಿ’ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಆಗಮಿಸಿದ್ದರು. ಇವರ ಅನ್ಯೋನ್ಯತೆ ಬಗ್ಗೆ ಕೇಳಲಾಯಿತು. ಆಗ ರಿಷಬ್ ಹಾಗು ರಾಜ್ ಶೆಟ್ಟಿ ಕಿತ್ತಾಡಿಕೊಂಡಿದ್ದಾರೆ. ‘ನಮ್ಮ ನಿಜವಾದ ಫ್ರೆಂಡ್ಶಿಪ್ ನೋಡಬೇಕು ಎಂದರೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ನೀವು ಬರಬೇಕು. ರಾಜ್ ಮೋಸ ಮಾಡ್ತಾರೆ’ ಎಂದು ರಿಷಬ್ ಆರೋಪಿಸಿದರು. ‘ನಾನು ಮೋಸ ಮಾಡಲ್ಲ. ಪ್ರಮೋದ್ ಶೆಟ್ಟಿನ ಬೇಕಿದ್ರೆ ಕೇಳಿ’ ಎಂದು ರಾಜ್. ‘ಅವನದ್ದೂ ಮೋಸವೇ’ ಎಂದು ರಿಷಬ್ ಉತ್ತರಿಸಿದರು.