ಕುಂದಾನಗರಿ ಬೆಳಗಾವಿಗೆ ಬರ್ತಿರೋ ಪ್ರಧಾನಿ ನರೇಂದ್ರ ಮೋದಿಗೆ ನೀಡಲು ರೆಡಿಯಾಗಿದೆ ವಿಶೇಷ ಗಿಫ್ಟ್. ಕಲಾವಿದನ ಕೈಚಳಕ, ಬೆಲ್ಲದಲ್ಲಿ ಅರಳಿರುವ ನರೇಂದ್ರ ಮೋದಿ ಕಲಾಕೃತಿ. ನರೇಂದ್ರ ಮೋದಿ ಪ್ರತಿರೂಪ ಬೆಲ್ಲದಲ್ಲಿ ಕೆತ್ತನೆ ಮಾಡಿ ಪ್ರಧಾನಿಗೆ ಗಿಫ್ಟ್. ಪ್ರಧಾನಿಗೆ ಗಿಫ್ಟ್ ನೀಡಲಿರುವ ಕುಡಚಿ ಶಾಸಕ ಪಿ.ರಾಜೀವ್. ಎಂಟು ಕೆ.ಜಿ ಸಾವಯವ ಬೆಲ್ಲದಲ್ಲಿ ಮೋದಿ ಪ್ರತಿರೂಪ ಕೆತ್ತನೆ. ರಾಯಬಾಗದ ಕಲಾವಿದ ಬಾಬುರಾವ್ ನಿಡೋಣಿ ಸಿದ್ದಪಡಿಸಿರೋ ಕಲಾಕೃತಿ. 7 ದಿನಗಳ ಸತತ ಪ್ರಯತ್ನ ಮೂಲಕ ಸಿದ್ದಗೊಂಡಿರೋ ಕಲಾಕೃತಿ.