‘ಚಿತ್ರರಂಗದ ವಿವಾದ ಬೀದಿಗೆ, ಕೋರ್ಟ್​ಗೆ ಹೋಗಬಾರದು’: ದ್ವಾರಕೀಶ್​ ಪುತ್ರ ಯೋಗಿ ಹೇಳಿಕೆ

ನಿರ್ಮಾಪಕ ಎಂ.ಎನ್​. ಕುಮಾರ್​ ಮತ್ತು ನಟ ಕಿಚ್ಚ ಸುದೀಪ್​ ಅವರ ನಡುವಿನ ಹಣಕಾಸು ವ್ಯವಹಾರವು ವಿವಾದದ ಸ್ವರೂಪ ಪಡೆದುಕೊಂಡಿದೆ. ಕೋರ್ಟ್​ ಮೂಲಕ ನ್ಯಾಯ ಪಡೆಯಲು ಕಿಚ್ಚ ಸುದೀಪ್​ ನಿರ್ಧರಿಸಿದ್ದಾರೆ. ಆದರೆ ಚಿತ್ರರಂಗದಲ್ಲಿನ ವಿವಾದಗಳು ಕೋರ್ಟ್​ ಮೆಟ್ಟಿಲು ಏರಬಾರದು ಎಂದು ದ್ವಾರಕೀಶ್​ ಅವರ ಪುತ್ರ ಯೋಗಿ ಹೇಳಿದ್ದಾರೆ. ‘ಎಲ್ಲರೂ ನನಗೆ ಸ್ನೇಹಿತರು. ಚಿತ್ರರಂಗ ಒಂದು ಕುಟುಂಬ. ಆ ಕುಟುಂಬದ ವಿವಾದ ನಾಲ್ಕು ಗೋಡೆ ನಡುವೆ ಬಗೆಹರಿಯಬೇಕು. ಇಲ್ಲಿನ ಮನಸ್ತಾಪಗಳನ್ನು ಕೋರ್ಟ್​ಗೆ, ಬೀದಿಗೆ ತೆಗೆದುಕೊಂಡು ಹೋಗುವುದು ತಪ್ಪು’ ಎಂದು ಯೋಗಿ ದ್ವಾರಕೀಶ್​ ಹೇಳಿದ್ದಾರೆ.