ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಅವರನ್ನು ಭೇಟಿ ಆಗಬೇಕು ಎಂಬುದು ಅನೇಕರ ಬಯಕೆ. ಆ ಉದ್ದೇಶದಿಂದ ಹಲವರು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಕಾಯುತ್ತಿದ್ದಾರೆ. ಆದರೆ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ದರ್ಶನ್ ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ. ದರ್ಶನ್ ಅಭಿಮಾನಿ ಆಗಿರುವ ಸುನಿಲ್ ಎಂಬ ಆಟೋ ಚಾಲಕ ಇಂದು (ಜೂನ್ 30) ಜೈಲಿನ ಎದುರು ನಿಂತು ಕಾದಿದ್ದಾರೆ. ‘ನಮಗೆ ಕಷ್ಟ ಇದ್ದಾಗ ನಾವು ಅವರ ಮನೆಗೆ ಹೋಗುತ್ತೇವೆ. ಅದೇ ರೀತಿ, ಅವರಿಗೆ ಕಷ್ಟ ಆದಾಗ ನಾವು ಅವರ ಜೊತೆಯಲ್ಲಿ ನಿಲ್ಲಬೇಕು. ದರ್ಶನ್ ಅವರನ್ನು ನೋಡಿದರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ. ನಮ್ಮ ಬಾಸ್ನ ನೋಡಿದ್ವಿ ಎನ್ನುವ ಖುಷಿಯಲ್ಲಿ ಕೆಲಸ ಮಾಡುತ್ತೇವೆ. ನಾನು ಮಾರತ್ತಹಳ್ಳಿಯಿಂದ ಬಂದಿದ್ದೇನೆ. ತುಂಬ ಬೇಸರ ಆಗಿದೆ. ಇಲ್ಲಿಗೆ ಬರುವ ಅಭಿಮಾನಿಗಳು ಯಾರಿಗೂ ತೊಂದರೆ ಕೊಡಬಾರದು. ಅನೇಕರಿಗೆ ಬಾಸ್ ಸಹಾಯ ಮಾಡಿದ್ದಾರೆ. ಯಾರದ್ದೇ ತಪ್ಪು ಇದ್ದರೂ ಶಿಕ್ಷೆ ಆಗಲಿ. ಬಾಸ್ ಹೊರಗೆ ಬಂದಮೇಲೆ ಒಳ್ಳೆಯ ಕೆಲಸ ಮುಂದುವರಿಸಲಿ’ ಎಂದು ಸುನಿಲ್ ಹೇಳಿದ್ದಾರೆ.