ಅರಿಜೋನಾದಲ್ಲಿ ಬಿಸಿನೆಟ್ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ, ಓರ್ವ ಸಾವು, ಹಲವರಿಗೆ ಗಾಯ

ಅರಿಜೋನಾದ ಸ್ಕಾಟ್ಸ್‌ಡೇಲ್ ವಿಮಾನ ನಿಲ್ದಾಣದಲ್ಲಿ ಬಿಸಿನೆಟ್​ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬಿಸಿನೆಸ್​ ಜೆಟ್​ಗೆ ಖಾಸಗಿ ವಿಮಾನ ಡಿಕ್ಕಿ ಹೊಡೆದಿದೆ. ಸಧ್ಯಕ್ಕೆ ರನ್​ ವೇ ಮುಚ್ಚಲಾಗಿದೆ. ಸ್ಕಾಟ್‌ಡೇಲ್ ವಿಮಾನ ನಿಲ್ದಾಣವು ಫೀನಿಕ್ಸ್ ಪ್ರದೇಶದಿಂದ ಒಳಗೆ ಮತ್ತು ಹೊರಗೆ ಬರುವ ವಿಮಾನಗಳಿಗೆ ಜನಪ್ರಿಯ ಕೇಂದ್ರವಾಗಿದೆ.