ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ

ಟಿವಿ9 ವರದಿಗಾರ ಮುಷ್ಕರ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಜೊತೆಯೂ ಮಾತಾಡಿದ್ದಾರೆ. ಅವರು ಹೇಳುವ ಪ್ರಕಾರ ಅಧಿಕಾರಿಯೊಬ್ಬರು ಇವರನ್ನು ಕಂಡು ಮಾತಾಡಿ ಒಂದು ತಿಂಗಳ ಸಂಬಳ ಅವರ ಅಕೌಂಟ್​​ಗಳಿಗೆ ಹಾಕಿಸುವುದಾಗಿ ಹೇಳಿದ್ದಾರಂತೆ. ಅದರೆ ಅವರ ಮಾತಿನ ಮೇಲೆ ಸಿಬ್ಬಂದಿಗೆ ಭರವಸೆ ಇಲ್ಲ. ಯಾಕೆಂದರೆ ಇದಕ್ಕೆ ಮುಂಚೆ ನೀಡಿದ ಚೆಕ್ ಮಾನ್ಯವಾಗಿಲ್ಲವಂತೆ. ಸಚಿವರೇ ಮತ್ತು ಅಧಿಕಾರಿಗಳೇ ಗಮನಿಸಿ.