ಪಕ್ಷದ ಎಲ್ಲಾ ಹಿರಿಯರನ್ನು ಮುಗಿಸಿದ್ರಿ ಎಂದು BJP ನಾಯಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಬಿಜೆಪಿ ವಿರುದ್ಧ ಯಾವತ್ತೂ ಮಾತಾಡಲ್ಲ, ಪಕ್ಷ ತಾಯಿ ಸಮಾನ. ಕೆಲ ದೌರ್ಬಲ್ಯಗಳ ಬಗ್ಗೆ ಮಾತನಾಡಬೇಕಿದೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ.. ಬಹಿರಂಗವಾಗಿ ಮಾತನಾಡುವುದು ತಪ್ಪು ಅಂತಾ ನನಗೆ ಗೊತ್ತಿದೆ.. ಯಾರಿಗೂ ಅಪಮಾನ‌ ಮಾಡುವ ಉದ್ದೇಶವಿಲ್ಲ. BSYರನ್ನು ಕೆಳಗಿಳಿಸಿದಾಗ ಕೆಲವರನ್ನು ಮಾತನಾಡುವುದಕ್ಕೆ ಬಿಟ್ಟರು. ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ನಷ್ಟ ಆಗಿದ್ದು ಅವರಿಗಲ್ಲ, ಪಕ್ಷಕ್ಕೆ. ಅಧಿಕಾರಕ್ಕೆ ಬರಲು ಇವರಿಗೆ ಬಿ.ಎಸ್​.ಯಡಿಯೂರಪ್ಪ ಮುಖ ಬೇಕು. ಅಧಿಕಾರದಲ್ಲಿ ಎಂಜಾಯ್ ಮಾಡಲು ಇವರಿಗೆ ಯಡಿಯೂರಪ್ಪ ಬೇಡ. ಯಡಿಯೂರಪ್ಪ ಸಿಎಂ ಆಗಿರುತ್ತಿದ್ದರೆ ಬಿಜೆಪಿಗೆ ಈ ಸ್ಥಿತಿ ಬರುತ್ತಿರಲಿಲ್ಲ.