ಸಿಂಪಲ್ ಸುನಿ ನಿರ್ದೇಶನದ ಮೊದಲ ಸಿನಿಮಾ ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’ ಚಿತ್ರ ರಿಲೀಸ್ ಆಗಿ ಮಾರ್ಚ್ 8ಕ್ಕೆ ಬರೋಬ್ಬರಿ 10 ವರ್ಷ ತುಂಬಿದೆ. ಈ ವಿಶೇಷ ದಿನದಂದು ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾ ಘೋಷಣೆ ಆಗಿದೆ. ಸುನಿ ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್, ಸ್ವಾತಿಷ್ಠ ಹಾಗೂ ಮಲ್ಲಿಕಾ ನಟಿಸುತ್ತಿದ್ದಾರೆ. ಸ್ವಾತಿಷ್ಠ ಅವರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಅವರು ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.