ಇಂಜಿನೀಯರ್ ಮನೆಮೇಲೆ ಲೋಕಾಯುಕ್ತ ದಾಳಿ

ಸರ್ಕಾರದ ಎಲ್ಲ ಇಲಾಖೆಗಳು ಭ್ರಷ್ಟ ಅಧಿಕಾರಿಗಳಿಗೆ ಪ್ರಶಸ್ತವಾಗಿ ಮೇಯುವ ಅವಕಾಶ ಕಲ್ಪಿಸುತ್ತವೆ, ಆದರಲ್ಲೂ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಹೆಚ್ಚು. ಮದುವೆ ವಯಸ್ಸಿನ ಹೆಣ್ಣಮಕ್ಕಳನ್ನು ಹೆತ್ತ ಪೋಷಕರು ಸರ್ಕಾರಿ ನೌಕರಸ್ಥನನ್ನು ಅಳಿಯನಾಗಿ ಮಾಡಿಕೊಳ್ಳಲು ತವಕ ಪಡುವುದಕ್ಕೆ ಪ್ರಾಯಶಃ ಇದೂ ಒಂದು ಕಾರಣವಿರಬಹುದು. ಹಾಗಂತ ಎಲ್ಲ ಸರ್ಕಾರೀ ನೌಕರರು ಭ್ರಷ್ಟರಲ್ಲ.