ಕಳ್ಳತನದ ಬೈಕ್​ಗಳಿಗೆ RTO ಕಚೇರಿಯಲ್ಲಿ ಗೋಲ್​ಮಾಲ್

ದಾವಣಗೆರೆ, ಆಗಸ್ಟ್​ 2: ದಾವಣಗೆರೆ ಆರ್​ಟಿಒ (Davangere RTO) ಕಚೇರಿ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಆರ್​ಟಿಒ ಕಚೇರಿಯ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಆರ್​ಟಿಒ ಕಚೇರಿಯ ಸಿಬ್ಬಂದಿ ಪ್ರದೀಪ್​, ಜಗದೀಶ್​​​, ಶಶಿಕುಮಾರ್​ ಮತ್ತು ವಸಂತಕುಮಾರ್​ ಬಂಧಿತ ಆರೋಪಿಗಳು. ನಕಲಿ ದಾಖಲೆ (documents) ಸೃಷ್ಟಿಸಿ, ಕದ್ದ ಬೈಕ್​ಗಳನ್ನು (Bike Theft) ಬೇರೆಯರ ಹೆಸರಿಗೆ ನೋಂದಣಿ ಮಾಡಿದ್ದ ಆರೋಪ ಈ ನಾಲ್ವರು ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.