ಶಿವಕುಮಾರ್ ತಾನು ಮಾಡಿರುವ ಆಡಿಯೋದಲ್ಲಿ ಸಚಿವರು ತನ್ನ ಸಾವಿಗೆ ಯಾಕೆ ಕಾರಣ ಅಂತ ಸ್ಪಷ್ಟವಾಗಿ ಹೇಳಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ಸಚಿವರಿಗೆ ಭಯಂಕರ ಕೋಪ ಬರುತಿತ್ತು ಎಂದು ಹೇಳಿದ್ದಾರೆ. ಅದು ಎಲ್ಲ ಕಾಂಗ್ರೆಸ್ ನಾಯಕರಲ್ಲಿ ಕಾಣುವ ಸಾಮಾನ್ಯ ಸಂಗತಿಯಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹರಬರುತ್ತದೆ ಅಂತ ಡಾ ಶರಣಪ್ರಕಾಶ್ ಪಾಟೀಲ್ ಹೇಳಿದರು.