ಉಕ್ರೇನ್​ಗೆ ಐತಿಹಾಸಿಕ ಭೇಟಿ; ಕೈವ್​ನಲ್ಲಿ ಝೆಲೆನ್ಸ್ಕಿಯನ್ನು ತಬ್ಬಿಕೊಂಡ ಪ್ರಧಾನಿ ನರೇಂದ್ರ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೈವ್​ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಇಂದು ಭೇಟಿಯಾಗಿದ್ದಾರೆ. ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಸಭೆಗೂ ಮೊದಲು ಪರಸ್ಪರ ಅಪ್ಪಿಕೊಂಡು, ಹಸ್ತಲಾಘವ ನೀಡಿದ್ದಾರೆ.