ನೀತಿ ಪಾಠ ಬೋಧನೆ: ಶಿಕ್ಷಕರ ದಿನಾಚರಣೆ ವೇಳೆ ಶಿಕ್ಷಕರಿಗೆ ಸ್ಪೆಷಲ್​ ಕ್ಲಾಸ್​ ತಗೊಂಡ ಶಾಸಕ ಜೆ. ಟಿ. ಪಾಟೀಲ್

ಬಾಗಲಕೋಟೆ: ಚುನಾವಣೆಯಲ್ಲಿ ಹಣ ಪಡೆದು ಈಡಿಸಿ (ಮತ) ಕೊಡ್ತೀರಿ, ನೀವು ಮಕ್ಕಳಿಗೆ ಯಾವ ನೈತಿಕ ಪಾಠ ಕೊಡ್ತೀರಿ.. ಬಡವರು ರೊಕ್ಕಾ ತಗೊಂಡು ಓಟು ಹಾಕಿದ್ರೆ ಅವರನ್ನ ಶಪಿಸುತ್ತೇವೆ.. ಚುನಾವಣೆ ಭ್ರಷ್ಟಾಚಾರ ಹುಟ್ಟಾಕಿದವರು ನಮ್ಮ ಬಳ್ಳಾರಿ ರೆಡ್ಡಿಗಳು.. ನಾವೂ ರಾಜಕಾರಣಿಗಳು ಕೂಡ ಕೆಟ್ಟಿದೀವಿ, ನಾವೇನು ಪರಿಶುದ್ಧರಾಗಿ ಉಳಿದಿಲ್ಲ ಎಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ವೇಳೆ ಶಿಕ್ಷಕರಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಶಾಸಕ ಜಗದೀಶ್ ತಿಮ್ಮನಗೌಡ ಪಾಟೀಲ್ ನೈತಿಕ ಪಾಠ ಮಾಡಿದರು.