ಬೆಂಗಳೂರಿನಲ್ಲಿ ಯುವಕ-ಯುವತಿಯರು ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡಿಂಗ್ ಮಾಡಿ, ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಒಬ್ಬ ಯುವತಿ ಬೈಕ್‌ನಲ್ಲಿ ಕುಳಿತು ಯುವಕನಿಗೆ ಮುತ್ತು ಕೊಟ್ಟಿದ್ದಾಳೆ. ಇತರ ವಾಹನ ಸವಾರರು ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.