Kempegowda Jayanti: ಒಂದೇ ವೇದಿಕೆಯಲ್ಲಿ ಡಿಕೆಶಿ ಅಶ್ವಥ್ ನಾರಾಯಣ್

ಕೆಂಪೇಗೌಡ ದಿನಾಚರಣೆ ಹಿನ್ನೆಲೆ ಒಂದೇ ವೇದಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮುಖಾಮುಖಿಯಾಗಿದ್ದಾರೆ. ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಭಾಗಿಯಾಗಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಾಲಾನಂದನಾಥ ಶ್ರೀಗಳು ಕೂಡ ಭಾಗಿಯಾಗಿದ್ದರು, ಡಿಕೆ ಶಿವಕುಮಾರ್ ಮತ್ತು ಅಶ್ವತ್‌ ನಾರಾಯಣ್​ಗೆ ಶ್ರೀಗಳು ಪರಸ್ಪರ ರಾಜಕೀಯವಾಗಿ ಬೈದಾಡಿಕೊಳ್ಳದಂತೆ ಕಿವಿಮಾತು ಹೇಳಿದ್ದಾರೆ.