ಪಕ್ ಚಹರ್ ಕೂಡ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಲು ಯತ್ನಿಸಿದರು. ಆದರೆ ಡೀಪ್ ಮಿಡ್ವಿಕೆಟ್ನಲ್ಲಿ ನಿಂತಿದ್ದ ಫಿಲ್ ಸಾಲ್ಟ್ ಲಾಂಗ್ ಆಫ್ನತ್ತ ಓಡಿ ಬಂದು ಕ್ಯಾಚ್ ತೆಗೆದುಕೊಂಡರು. ಆದರೆ ಇಲ್ಲಿ ನಿಯಂತ್ರಣ ಕಳೆದುಕೊಂಡ ಸಾಲ್ಟ್ ಬೌಂಡರಿಯಿಂದ ಆಚೆ ಹೋಗಲಾರಂಭಿಸಿದರು. ಈ ವೇಳೆ ಅವರು ಕ್ಯಾಚ್ ಅನ್ನು ಹಿಡಿದು ಮೇಲಕ್ಕೆ ಎಸೆದರು. ಇತ್ತ ಲಾಂಗ್ ಆಫ್ನಿಂದ ಸಾಲ್ಟ್ ಬಳಿಗೆ ಓಡಿ ಬಂದಿದ್ದ ಟಿಮ್ ಡೇವಿಡ್ ಈ ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಮುಂಬೈ 2 ಎಸೆತಗಳಲ್ಲಿ 2 ವಿಕೆಟ್ಗಳನ್ನು ಕಳೆದಕೊಂಡಿತು. ಕೊನೆಗೆ ಈ ಓವರ್ನಲ್ಲಿ ಕೇವಲ 6 ರನ್ಗಳನ್ನು ಮಾತ್ರ ಕಲೆಹಾಕಿದ ಮುಂಬೈ 12 ರನ್ಗಳಿಂದ ಪಂದ್ಯವನ್ನು ಕಳೆದುಕೊಂಡಿತು.