ಕುಳಿತುಕೊಳ್ಳಲು ಜಾಗವಿಲ್ಲದೆ ಮಹಿಳೆಯೊಬ್ಬರು ಬಸ್ನ ಕಿಟಕಿ ಮೇಲೆ ಕುಳಿತುಕೊಂಡು ಪ್ರಯಾಣಿಸಿದ್ದಾರೆ. ಗದಗ ನಗರದಿಂದ ಹುಲಕೋಟಿ ಗ್ರಾಮಕ್ಕೆ ತೆರಳುವ ಬಸ್ನಲ್ಲಿ ಈ ರೀತಿ ಪ್ರಯಾಣ ಮಾಡಲಾಗಿದೆ. ಈ ರೀತಿಯ ಪ್ರಯಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕಿಟಿಕಿಯಿಂದ ಹೊರಗಡೆ ಬಿಳುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲದೆ, ಓವರ್ ಟೇಕ್ ಮಾಡುವಾಗ ಬೇರೊಂದು ವಾಹನ ಸೊಂಟಕ್ಕೆ ಹೊಡೆಯುವ ಸಾಧ್ಯತೆಯೂ ಹೆಚ್ಚು.