ಕುಮಾರಸ್ವಾಮಿಯವರು 4-5 ಸ್ಥಾನಗಳನ್ನು ಜೆಡಿಎಸ್ ಗೆ ಬೇಕೆಂದು ಕೇಳಿದಾಗಲೇ ಬಿಜೆಪಿ ವರಿಷ್ಠರಲ್ಲಿ ಅಸಮಾಧಾನ ಮೂಡಿದ್ದು ಸುಳ್ಳಲ್ಲ. ಕೊನೆಗೆ ಹಾಸನ, ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳನ್ನು ತಮಗೆ ನೀಡಲಾಗಿದೆಯೆಂದು ಕಳೆದವಾರ ಕುಮಾರಸ್ವಾಮಿ ಹೇಳಿದ್ದರು. ಆದರೆ ಬಿಜೆಪಿ ಸಂಸದ ಪ್ರತಿನಿಧಿಸುವ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಹಿಂದೇಟು ಹಾಕುತ್ತಿರುವುದು ಕುಮಾರಸ್ವಾಮಿಯವರಲ್ಲಿ ಅಸಮಾಧಾನ ಮೂಡಿಸಿದೆ ಮತ್ತು ಅದನ್ನವರು ಪರೋಕ್ಷವಾಗಿ ಹೊರಹಾಕುತ್ತಿದ್ದಾರೆ.