ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಶೇಷವಾದ ಪ್ರೀತಿ ತೋರಿಸುತ್ತಾರೆ. ಪ್ರತಿ ಸೀಸನ್ ಕೊನೆಗೊಳ್ಳುವಾಗಲೂ ಅವರು ಸ್ಪರ್ಧಿಗಳಿಗಾಗಿ ಅಡುಗೆ ಮಾಡಿ ಕಳಿಸುತ್ತಾರೆ. ಅದು ಈ ಸೀಸನ್ನಲ್ಲೂ ಮುಂದುವರಿದಿದೆ. ಸುದೀಪ್ ಅವರು ತಮ್ಮ ಕೈಯಾರೆ ತಯಾರಿಸಿದ ಊಟವನ್ನು ದೊಡ್ಮನೆಗೆ ಕಳಿಸಿಕೊಟ್ಟಿದ್ದಾರೆ. ಅದನ್ನು ಸವಿದು ಮನೆ ಮಂದಿ ಖುಷಿಪಟ್ಟಿದ್ದಾರೆ.