ಸ್ಕಾಟಿಷ್ ತತ್ವಜ್ಞಾನಿ ಥಾಮಸ್ ಕಾರ್ಲೈಲ್ ಅವರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಬರುಣ್ ದಾಸ್, ವಿಶ್ವದ ಇತಿಹಾಸವು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯಾಗಿದೆ ಎಂದು ಹೇಳಿ 140 ಕೋಟಿ ಜನರನ್ನು ಮುನ್ನಡೆಸುವ ಜನನಾಯಕ ಇಂದು ನಮ್ಮ ನಡುವೆ ಇರುವುದು ಅದೃಷ್ಟದ ಸಂಗತಿ ಎಂದರು.ಚಂದ್ರನ ಮೇಲೆ ರೋವರ್ ಇಳಿದ ಯಶಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲಬೇಕೆಂದ ಬರುಣ್ ದಾಸ್ ಆ ಮಹತ್ಸಾಧನೆಯನ್ನು ಕೊಂಡಾಡಿದರು.