ರಾಜ್ಯದೆಲ್ಲೆಡೆ ಈಗ ಜಾತಿ ಗಣತಿ ವರದಿಯ ಚರ್ಚೆ ನಡೆಯುತ್ತಿದೆ. ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರನ್ನು ಮನಸಾರೆ ಹೊಗಳಿದ ಪರಮೇಶ್ವರ್, ದೇಶಕ್ಕೆ ಮಾದರಿಯಾಗುವ ತೀರ್ಪನ್ನು ಸಿದ್ದರಾಮಯ್ಯ ತೆಗೆದುಕೊಳ್ಳಲಿದ್ದಾರೆ ಅನ್ನುತ್ತಾರೆ. ಅವರು ಜಾತಿ ಗಣತಿ ವರದಿಗೆ ಸಂಬಂಧಿಸಿದಂತೆ ಈ ಮಾತನ್ನು ಹೇಳಿರಬಹುದೇ?