ಮಹಾರಾಷ್ಟ್ರದ ಸೆಂಟ್ರಲ್​ ಬ್ಯಾಂಕ್​ನಲ್ಲಿ ಭಾರಿ ಅಗ್ನಿ ಅವಘಡ

ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಶಾಖಾ ಕಚೇರಿಯಲ್ಲಿ ಸಂಭವಿಸಿದ ಭಾರಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಪ್ರಮುಖ ದಾಖಲೆಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್ ತೆರೆದ ಸ್ವಲ್ಪ ಸಮಯದ ನಂತರ ಬ್ಯಾಂಕಿನಲ್ಲಿ ಅಳವಡಿಸಲಾದ ಹವಾನಿಯಂತ್ರಣ ಸಾಧನದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ.