ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಡಾ ಬಿಅರ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿರುವರೆಂದು ವಿವಿಧ ಸಂಘಟನೆಗಳು ಮೈಸೂರು ಮತ್ತು ಮಂಡ್ಯ ಬಂದ್ಗೆ ಕರೆ ನೀಡಿವೆ. ಮಂಡ್ಯದಲ್ಲಿ ಚಿತ್ರಣ ಬೇರೆಯಾಗಿದೆ. ಬಂದ್ಗೆ ಜನರ ಪ್ರತಿಕ್ರಿಯೆ ನೀರಸವಾಗಿದೆ. ಮುಚ್ಚಿದ್ದ ಅಂಗಡಿ ಮುಂಗಟ್ಟುಗಳನ್ನು ತೆರೆಸುವ ಕೆಲಸ ಅಲ್ಲಿನ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ.