ಪಿಂಚಣಿ ಹಣ ಬಾರದೆ ನಿತ್ಯ ಕಚೇರಿಗೆ ಅಲೆದಾಡುತ್ತಿರುವ ವೃದ್ಧ ದಂಪತಿ ಕಣ್ಣೀರು

ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ನಿವಾಸಿ ಬಸಮ್ಮ ಅವರಿಗೆ ಬರಬೇಕಿದ್ದ ಪಿಂಚಣಿ ಹಣ ಬೇರೆ ಯಾರದ್ದೋ ಖಾತೆಗೆ ಜಮೆಯಾಗಿದೆ. ಪ್ರತಿ ತಿಂಗಳು 1200 ರೂ.ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಪಡೆಯುತ್ತಿದ್ದ ಬಸಮ್ಮ ಅವರಿಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ಜಮೆಯಾಗಿಲ್ಲ.