ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಮದುವೆಯೊಂದು ನಡೆದಿದೆ. ಆದರೆ ಮದುವೆಗೂ ಮುನ್ನ ವಧು, ತನ್ನಿಂದ ದೂರವಾಗಿದ್ದ ವರನನ್ನು ಥಳಿಸಿ ಬಲವಂತವಾಗಿ ಮದುವೆಯಾಗಿದ್ದಾರೆ. ಕೆಲವು ಸಂಘ ಸಂಸ್ಥೆಗಳ ಮುಖಂಡರು ಇದಕ್ಕೆ ಸಾಥ್ ನೀಡಿದ್ದು, ಕೊನೆಗೂ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಪ್ರೀತಿಸಿದವಳು ಗರ್ಭೀಣಿಯಾದ ನಂತರ ಪ್ರಿಯಕರ, ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಕಿರುಗುಂಬಿ ನಿವಾಸಿ ಚೇತನ್ ಎಂಬಾತ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಹುಡುಗಿಯ ಕಡೆಯವರು ಆರೋಪಿಸಿದ್ದಾರೆ. ಇನ್ನು ಪ್ರಿಯತಮೆ ಚಿಕ್ಕಬಳ್ಳಾಫುರ ತಾಲೂಕಿನ ಇಟಪನಹಳ್ಳಿ ನಿವಾಸಿ. ಕೊನೆಗೆ ಇಬ್ಬರಿಗೂ ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟದಲ್ಲಿ ಮದುವೆ ನೆರವೇರಿದೆ. ಮದುವೆಯ ಅಷ್ಟೂ ದೃಶ್ಯಗಳನ್ನು ಮುಖಂಡರು ಸಂಫೂರ್ಣವಾಗಿ ವೀಡಿಯೊ ಮಾಡಿದ್ದಾರೆ. ಇನ್ನು ಸಿನಿಮೀಯ ರೀತಿಯಲ್ಲಿ ಮದುವೆ ಮಾಡಿದ ಮೇಲೆ ಹಾಡು ಹಾಡಿಯೂ ವಧು-ವರರನ್ನು ಮುಖಂಡರು ರಂಜಿಸಿದ್ದಾರೆ.