‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ

ಚಿಕ್ಕಣ್ಣ ಹಾಗೂ ಶರಣ್ ನಟನೆಯ ‘ಅಧ್ಯಕ್ಷ’ ಸಿನಿಮಾ ಯಶಸ್ವಿ ಆಗಿತ್ತು. ಶರಣ್ ಅಧ್ಯಕ್ಷನ ಪಾತ್ರ ಮಾಡಿದರೆ ಚಿಕ್ಕಣ್ಣ ಉಪಾಧ್ಯಕ್ಷನಾಗಿ ಕಾಣಿಸಿಕೊಂಡಿದ್ದರು. ಈಗ ‘ಉಪಾಧ್ಯಕ್ಷ’ ಹೆಸರಿನ ಸಿನಿಮಾ ಬರುತ್ತಿದೆ. ಚಿತ್ರದ ಕಥೆ ಕೇಳಿ ಯಶ್ ಇಷ್ಟಪಟ್ಟಿದ್ದರಂತೆ. ‘ಫೈನಲ್ ಸ್ಕ್ರಿಪ್ಟ್ ಆದ ಬಳಿಕ ಯಶ್ ಅವರನ್ನು ಭೇಟಿ ಮಾಡಿದ್ದೆ. ಒಂದೆರಡು ಕರೆಕ್ಷನ್ ಹೇಳಿದ್ರು. ಸಾಂಗ್ ರೆಡಿ ಆದ ಬಳಿಕ ಯಶ್ ಅವರ ಭೇಟಿ ಮಾಡಿದ್ದೆ. ಡ್ಯಾನ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದರು’ ಎಂದು ಯಶ್ ಸೂಚಿಸಿದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ ಚಿಕ್ಕಣ್ಣ. ಈ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ.