ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟಗಳು ಸಾಮಾನ್ಯ. ಯಾರು ಯಾವಾಗ ಹೇಗೆ ವರ್ತಿಸುತ್ತಾರೆ ಎಂದು ಹೇಳೋದು ಕಷ್ಟ. ಇಂದು (ಡಿಸೆಂಬರ್ 20) ರಿಲೀಸ್ ಆಗಿದ್ದ ಪ್ರೋಮೋದಲ್ಲಿ ವಿನಯ್ ಹಾಗೂ ಅವಿನಾಶ್ ಕಿತ್ತಾಟ ನಡೆಸಿದ್ದರು. ಈಗ ರಿಲೀಸ್ ಆಗಿರೋ ಹೊಸ ಪ್ರೋಮೋದಲ್ಲಿ ನಮ್ರತಾ ಹಾಗೂ ತನಿಷಾ ಕಿತ್ತಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ಮೊದಲು ಕೂಡ ಅನೇಕ ಬಾರಿ ತನಿಷಾ ವಿರುದ್ಧ ನಮ್ರತಾ ತಿರುಗಿ ಬಿದ್ದಿದ್ದರು. ಈಗಲೂ ಹಾಗೆಯೇ ಆಗಿದೆ. ಇಂದು ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.