ಆರ್‌ಸಿಬಿ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದ ಸ್ವಸ್ತಿಕ್ ಚಿಕಾರ, ಯಾರೂ ಮಾಡಲು ಧೈರ್ಯ ಮಾಡದ ಕೆಲಸವನ್ನು ಮಾಡಿದ್ದಾರೆ. 19 ವರ್ಷದ ಸ್ವಸ್ತಿಕ್, ತಮಾಷೆಯಾಗಿ ಕೊಹ್ಲಿಯ ಅನುಮತಿ ಪಡೆಯದೆ ಅವರ ಸುಗಂಧ ದ್ರವ್ಯವನ್ನು ಬ್ಯಾಗ್ನಿಂದ ತೆಗೆದು ಬಳಸಿದ್ದಾನೆ. ಇದನ್ನು ನೋಡಿದ ಯಶ್ ದಯಾಳ್, ನಾಯಕ ರಜತ್ ಪಟಿದಾರ್ ಮತ್ತು ಇತರ ತಂಡದ ಸದಸ್ಯರು ಕೂಡ ಆಶ್ಚರ್ಯಚಕಿತರಾಗಿದ್ದಾರೆ.