ಪ್ರಲ್ಹಾದ್ ಜೋಶಿಯನ್ನು ಹಾಡಿ ಹೊಗಳಿದ ಅಮಿತ್ ಶಾ

ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಶಾ ಮಾತನಾಡಿದ್ದು, ಪ್ರಲ್ಹಾದ್​ ಜೋಶಿಯನ್ನು ಹಾಡಿ ಹೊಗಳಿದ್ದಾರೆ. ಪ್ರಲ್ಹಾದ್​ ಜೋಶಿ ಅವರು ನೋಡುವುದಕ್ಕೆ ತುಂಬಾ ಸಾಧಾರಣಾ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿ ಅಂತ ಬಂದಾಗ ಅವರು ನಮ್ಮ ಜೊತೆ ಜಗಳವಡಿಯಾದರೂ ಅಭಿವೃದ್ಧಿ ಮಾಡಿದ್ದಾರೆ. ಇಂತಹ ಸಂಸದರು ಸಿಕ್ಕಾಗ ಬಿಟ್ಟುಕೊಳ್ಳಬಾರದು ಎಂದು ಹೇಳಿದ್ದಾರೆ.