‘ಮೊದಲು ಆಚೆ ಹೋಗಿ ಎಂದು ತಳ್ಳಿದ್ದೆ’; ಹಳೆ ಘಟನೆ ನೆನೆದ ರಘು ದೀಕ್ಷಿತ್

‘ಬ್ಯಾಂಗ್​’ ಚಿತ್ರಕ್ಕೆ ಗಣೇಶ್​ ಪರಶುರಾಮ್​ ನಿರ್ದೇಶನ ಮಾಡಿದ್ದಾರೆ. ರಘು ದೀಕ್ಷಿತ್ ಈ ಚಿತ್ರದಲ್ಲಿ ಡಾನ್​ ಪಾತ್ರ ಮಾಡಿದ್ದಾರೆ. ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಕೂಡ ನಟಿಸಿದ್ದಾರೆ. ಈ ಸಿನಿಮಾ ಆಫರ್ ಬಂದಾಗ ಮೊದಲು ನಟಿಸೋಕೆ ನೋ ಎಂದಿದ್ದರು ರಘು ದೀಕ್ಷಿತ್. ‘ಮ್ಯೂಸಿಕ್ ಕಂಪೋಸರ್ ಹೀರೋ ಆಗೋಕೆ ಸಾಧ್ಯನಾ? ಟೀಂನವರು ಮೊದಲು ಮನೆಗೆ ಬಂದಾಗ ಬಾಗಿಲು ತೋರಿಸಿ ಮೊದಲ ಆಚೆ ಹೋಗಿ ಎಂದು ತಳ್ಳಿದ್ದೆ’ ಎಂದು ಹಳೆ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ನಟನಾಗಿ ರಘು ದೀಕ್ಷಿತ್​ಗೆ ಇದು ಮೊದಲ ಸಿನಿಮಾ.