ಬೀದರ್: ಒಂದಲ್ಲಾ ಒಂದು ಸಂದರ್ಭದಲ್ಲಿ ಯಾರೇ ಆಗಲಿ ಯಮದೂತರಂತೆ ಮೇಲೆರಗಿ ಬರುವ ದೈತ್ಯ ದ್ವಿಚಕ್ರ ವಾಹನಗಳು ಮತ್ತು ಅವು ಹೊರಸೂಸುವ ಭೀಕರ, ಕರ್ಕಶ ಶಬ್ದಕ್ಕೆ ಬೆಚ್ಚಿಬೀಳದವರು ಯಾರೂ ಇಲ್ಲ ಅನ್ನಬಹುದು. ಅಷ್ಟರಮಟ್ಟಿಗೆ ಕೆಲ ಪೀಡಾತ್ಮಕ ಬೈಕುಗಳು ಜನರನ್ನು ಹೈರಾಣಗೊಳಿಸಿರುತ್ತೆ. ಪೊಲೀಸರು ಅದರ ವಿರುದ್ಧ ಆಗಾಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುತ್ತಾರೆ. ಆದರೂ ಬೇಜವಾಬ್ದಾರಿ ಬೈಕ್ ಸವಾರರು ‘ಸಾಹಸ’ ಮಾಡುವುದುಂಟು. ಅಂತಹವರಿಗೆ ಬೀದರ್ ಪೊಲೀಸರು ಇಂದು ಬುಧಬವಾರ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಕರ್ಕಶ ಶಬ್ದ ಮಾಡಿಕೊಂಡು ಓಡಾಡುವ ಬೈಕ್ ಸವಾರರಿಗೆ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಬುದ್ದಿ ಕಲಿಸಲಾಗಿದೆ. ಬೀದರ್ ಪೊಲೀಸರು ಜಿಲ್ಲೆಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುವ ಬೈಕ್ ಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ.