ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ

ದೇವರಾಜೇಗೌಡ ಮಾಡಿರುವ ಆರೋಪಕ್ಕೆ ಶಿವಕಮಾರ್ ಅವರಿಂದ ಸಮಂಜಸ ಮತ್ತು ಸ್ಪಷ್ಟ ಉತ್ತರ ಮಾಧ್ಯಮದವರಿಗೆ ಸಿಗಲಿಲ್ಲ. ಅವರು ಆಡಿದ ಮಾತಿನಲ್ಲಿ ಸ್ಪಷ್ಟತೆಯ ಕೊರತೆ ಇತ್ತು. ವಿಷಯದ ಬಗ್ಗೆ ಅವರು ಮಾತಾಡಲು ಅನ್ಯಮನಸ್ಕತೆ ಪ್ರದರ್ಶಿಸಿದರು. ಮಾಧ್ಯಮ ಪ್ರತಿನಿಧಿಗಳು ಪುನಃ ದೇವರಾಜೇಗೌಡ ಆಡಿರುವ ಮಾತುಗಳನ್ನು ಉಲ್ಲೇಖಿಸಲಾರಂಭಿಸಿದಾಗ ಅವರು ಬೇರೆ ವಿಷಯ ಏನಾದರೂ ಇದ್ದರೆ ಹೇಳಿ ಎನ್ನುತ್ತಾರೆ!