ಮಳೆಯಾಗದಿದ್ದರೆ ಮತ್ತು ಅಗತ್ಯಕ್ಕಿಂತ ಜಾಸ್ತಿ ಮಳೆಯಾದರೆ ರೈತರಿಗೆ ಬವಣೆ ತಪ್ಪಿದ್ದಲ್ಲ. ಬುಧವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿರುವ ಕೆರೆಗಳೆಲ್ಲ ಭರ್ತಿಯಾಗಿವೆ. ಮಳೆ ಸುರಿದ ಬಗ್ಗೆ ರೈತರು ನೆಮ್ಮದಿ ತಳೆಯುವಂತೆಯೇ ಕೆರೆಗಳು ಉಕ್ಕಿ ಹರಿಯುತ್ತಿರುವ, ಕೋಡಿ ಹರಿದ ಇಲ್ಲವೇ ಏರಿ ಒಡೆದ ಸಮಸ್ಯೆ ಎದುರಾಗಿದೆ.