ಸಿದ್ದೇಶ್ವರ ಅವರು 72-ವರ್ಷ ವಯಸ್ಸಿನ ಹಿರಿಯ ರಾಜಕಾರಣಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿ ಅವರ ಪತ್ನಿ ಜಿಎಸ್ ಗಾಯತ್ರಿ ಅವರಿಗೆ ನೀಡಿತ್ತು. ಆದರೆ ಗಾಯತ್ರಿ ಕಾಂಗ್ರೆಸ್ ಪಕ್ಷದ ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಸೋತರು. ಪ್ರಾಯಶಃ ತಮಗೆ ಟಿಕೆಟ್ ಸಿಗದಂತೆ ಮಾಡಿದ್ದಕ್ಕೆ ಸಿದ್ದೇಶ್ವರ ಅವರಿಗೆ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಮೇಲೆ ಕೋಪವಿರಬಹುದು.