ಮಂಗಳೂರಿನ ಕೆಲರಾಯಿಯಲ್ಲಿ ಒಂದೇ ಕುಟುಂಬದ ಏಳು ದನ, ಕರುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಕಳೆದ 50 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿರುವ ಪ್ರಕಾಶ್ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ. ದನಗಳಿಗೆ ವಿಷಪ್ರಾಶನ ನೀಡಲಾಗಿದೆ ಎಂದು ಅನುಮಾನಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಶುಪಾಲನೆ ಇಲಾಖೆಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.