ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬೇರೆ ಬೇರೆ ಭಾಗಗಳ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಲೇ ಇದ್ದಾರೆ ಇದುವರೆಗೆ ಏನಿಲ್ಲವೆಂದರೂ ಸುಮಾರು 5,000 ಮುಖಂಡರು ಪಕ್ಷಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಹೊಸದಾಗಿ ಪಕ್ಷ ಸೇರಿದವರಿಗೆ ಸಮಯ ವ್ಯರ್ಥ ಮಾಡದಂತೆ ತಿಳಿಸಿರುವುದಾಗಿ ಹೇಳಿದ ಶಿವಕುಮಾರ್ ಅವರ ಭವಿಷ್ಯ ಮುಖ್ಯ ಮತ್ತು ಅದರ ಬಗ್ಗೆಯೂ ತಮ್ಮ ಪಕ್ಷ ಯೋಚಿಸಬೇಕಾಗುತ್ತದೆ ಎಂದರು.