ಸರ್ಕಾರಿ ಬಸ್ ಇಲ್ಲದೆ ಕಾಫಿನಾಡಲ್ಲಿ ಭಕ್ತರು, ಪ್ರವಾಸಿಗರು ಪರದಾಟ

ಚಿಕ್ಕಮಗಳೂರು : ದಿಢೀರನೆ ಸರ್ಕಾರಿ ಬಸ್​​ಗಳು ಇಲ್ಲದೆ ಕಾಫಿನಾಡಿನಲ್ಲಿ ಪ್ರಯಾಣಿಕರು ಹಗಲು ರಾತ್ರಿ ಎನ್ನದೆ ಅವೇಳೆಯಲ್ಲಿ ಪರದಾಟ ನಡೆಸಿದರು. ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ ತಾಲೂಕಿನ ಹೊರನಾಡು ಕ್ಷೇತ್ರದಲ್ಲಿ ಬಸ್ಸಿಗಾಗಿ ಭಕ್ತರು ಮತ್ತು ಪ್ರವಾಸಿಗರು (Devotees, Tourists) ತಮ್ಮ ಸುಗಮ ಪ್ರಯಾಣಕ್ಕಾಗಿ ಬಹಳ ತ್ರಾಸಪಟ್ಟರು. ನಿನ್ನೆ ಶುಕ್ರವಾರ ಸಂಜೆಯಿಂದ ರಾತ್ರಿವರೆಗೂ ಬಸ್ಸಿಗಾಗಿ ಪ್ರವಾಸಿಗರು ಕಾದು ಸುಸ್ತಾದರು.